8310006979
ಮಂಗಳೂರು-ಉಡುಪಿ ಮೆಟ್ರೋ ಯೋಜನೆ ಪರಿಶೀಲನೆ
ಮಂಗಳೂರು – ಉಡುಪಿ: ಉಡುಪಿ-ಮಂಗಳೂರು ನಡುವೆ ದಿನವೂ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಟ್ರಾಫಿಕ್ ಹಾಗೂ ಖಾಸಗಿ ಬಸ್‌ಗಳ ಹೆಚ್ಚುವರಿ ದರದ ಹಿನ್ನಲೆಯಲ್ಲಿ ಮೆಟ್ರೋ ಸೇವೆಯ ಅವಶ್ಯಕತೆ ಉಂಟಾಗಿದೆ. ಕರ್ನಾಟಕ ಸರ್ಕಾರ ಮಂಗಳೂರು–ಉಡುಪಿ–ಮಣಿಪಾಲ ಸಂಪರ್ಕಿಸುವ 64 ಕಿ.ಮೀ. ಮೆಟ್ರೋ ಯೋಜನೆಯ ಪ್ರಸ್ತಾವನೆ ನೀಡಿದ್ದು, ಪ್ರಸ್ತುತ ಕಾರ್ಯ ಸಾಧ್ಯತಾ ವರದಿ ತಯಾರಿಸುವುದರಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಯೋಜನೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ವಾಣಿಜ್ಯ, ಆರೋಗ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಈ ಮೆಟ್ರೋ ಸೇವೆ ನೆರವಾಗಲಿದೆ. ಈ ಕುರಿತು ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಮತ್ತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ. Read More

HOME

CATEGORY

NEWS

EVENTS

MORE