ಸಿಂಗಾಪುರ ವಿರುದ್ಧ ಭಾರತ ಅಂಡರ್-20 ತಂಡಕ್ಕೆ ಭರ್ಜರಿ ಜಯ
ಎಎಫ್‌ಸಿ ಅಂಡರ್-20 ಏಷ್ಯನ್ ಕಪ್ ಅರ್ಹತಾ ಪಂದ್ಯಗಳ ಸಿದ್ಧತೆಯ ಭಾಗವಾಗಿ ನಡೆದ ಮೊದಲ ಸ್ನೇಹಪರ ಪಂದ್ಯದಲ್ಲಿ ಭಾರತ ಅಂಡರ್-20 ತಂಡ ಸಿಂಗಾಪುರವನ್ನು 3-0 ಗೋಲುಗಳಿಂದ ಸೋಲಿಸಿತು. ರಿಷಿ ಸಿಂಗ್, ಶಾಮಿ ಸಿಂಗಮಯುಂ ತಲಾ ಒಂದು ಗೋಲು ಗಳಿಸಿದರೆ, ಮತ್ತೊಂದು ಗೋಲು ಸಿಂಗಾಪುರದ ಆತ್ಮಘಾತಿ ಗೋಲಾಗಿತ್ತು. ಎರಡನೇ ಸ್ನೇಹಪರ ಪಂದ್ಯ ಆಗಸ್ಟ್ 6ರಂದು ನಡೆಯಲಿದೆ.